ರಾಗಿ ಹಿಟ್ಟು ಮುಖ್ಯವಾಗಿ ರಾಗಿ ಕಾಳಿನಿಂದ ತಯಾರಿಸಿದ ಪುಡಿ ಆಹಾರವಾಗಿದೆ. ಇದು ಪ್ರೋಟೀನ್ ಹಾಗೂ ಖನಿಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಸಸ್ಯಾಹಾರಿಗಳಿಗೆ ಇದು ಪ್ರೋಟೀನ್‍ನ ಅತಿ ಸೂಕ್ತ ಮೂಲವಾಗಿದೆ. == ರಾಗಿ ಹಿಟ್ಟಿನ ತಯಾರಿಕೆ == ಮೊದಲು ರಾಗಿಯನ್ನು ಸ್ವಚ್ಛಗೊಳಿಸಿ ತೊಳೆಯಲಾಗುತ್ತದೆ. ಇದು ಬಿಸಿಲಿನಲ್ಲಿ ಸಹಜವಾಗಿ ಒಣಗಲು ೫ ರಿಂದ ೮ ಗಂಟೆಗಳವರೆಗೆ ಬಿಡಲಾಗುತ್ತದೆ. ನಂತರ ಇದನ್ನು ಹಿಟ್ಟು ಮಾಡಲಾಗುತ್ತದೆ. ಕಡಿಮೆ ಹೀಮೊಗ್ಲೋಬಿನ್ ಮಟ್ಟವಿರುವ ಜನರಿಗೆ ಇದು ಅತ್ಯುತ್ತಮವಾಗಿದೆ. ರಾಗಿ ಹಿಟ್ಟಿನಿಂದ ರಾಗಿ ಗಂಜಿ, ರಾಗಿ ಹಲ್ವಾ, ರಾಗಿ ರೊಟ್ಟಿಯನ್ನು ತಯಾರಿಸಬಹುದು. ತಿನ್ನಲು ರುಚಿಯಾಗಿದ್ದು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. == ಬೇಕಿಂಗ್ == ಬೇಕ್ ಮಾಡುವಾಗ ಮೈದಾದ ಬದಲು ಅನೇಕ ಪೌಷ್ಟಿಕ ಲಾಭಗಳನ್ನು ಹೊಂದಿರುವ ರಾಗಿ ಹಿಟ್ಟನ್ನು ಬಳಸಬಹುದು. ರಾಗಿ ಕೇಕ್ ಮತ್ತು ರಾಗಿ ಬಿಸ್ಕತ್ತುಗಳನ್ನು ತಯಾರಿಸಬಹುದು. ರಾಗಿ ಹಿಟ್ಟು ಆಧಾರಿತ ಬೇಕರಿ ಉತ್ಪನ್ನಗಳು ಮತ್ತು ದಿಢೀರ್ ಮಿಶ್ರಣಗಳು ಈಗ ಬೇಡಿಕೆಯಲ್ಲಿವೆ. == ಉಲ್ಲೇಖಗಳು ==